ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಹಿಜಾಬ್ ಹಿಂದಿನ ಶಕ್ತಿಗಳೇ ಇದರ ಹಿಂದೆ ಇವೆ ಎಂಬ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಒಬ್ಬ ಹೋಮ್‌ ಮಿನಿಸ್ಟರ್, ಪಕ್ಷ ಅಂತ ತೊಗೊಂಡರೇ ರಾಜ್ಯ ಉಳಿಯಲು ಸಾಧ್ಯವಿಲ್ಲ. ಕಳೆದ ಹದಿನೈದು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದೆ. ಯಾರದ್ದೊ‌ ಕಡೆ ತೋರಿಸಿ ಸುಮ್ಮನೆ ಅವಲಕ್ಣಣ ಎನ್ನಿಸಿಕೊಳ್ಳಬೇಡಿ.. ಡಿಜಿಪಿ ಅಥಾವ ಎಸ್ಪಿ ಹೇಳಬೇಕು ಯಾರು ಇದರಲ್ಲಿ ಭಾಗಿಯಾಗಿದ್ದಾರೆಂದು. ಇತಂಹ ಮರ್ಡರ್ ಗಳು ರಾಜಕೀಯವಾಗಿ ಆಯಿತಾ, ಖಾಸಗೀಯಾಗಿ ಆಯಿತಾ,ಬೇರೆ ಉದ್ದೇಶ ಆಯಿತಾ  ಪೊಲೀಸ್ ಅಧಿಕಾರಿಗಳು ಸರ್ಟಿಫೈ ಮಾಡಬೇಕು. ತನಿಖೆ‌ ಮಾಡಿ ಯಾರೇ ಆದರೂ ಕಾನೂನು ಕ್ರಮ ಆಗಬೇಕು. ಕಾನೂನು ಸುವ್ಯವಸ್ಥೆ, ಹೋಮ್‌ ಮಿನಿಸ್ಟರ್, ಸರ್ಕಾರ ಫೇಲ್ ಆಗಿದೆ ಎಂದರು.


ಇದನ್ನೂ ಓದಿ : Siddaramaiah : 'ಬಿಜೆಪಿ ಬೆಂಬಲಿಗರು ನನ್ನ ವಿರುದ್ಧ ಅಪಪ್ರಚಾರ : ಇದು ಸಂಪೂರ್ಣ ಸುಳ್ಳು ಸುದ್ದಿ'


ಸುಮ್ಮನೆ ಬಾಳೆಹಣ್ಣು ತಿಂದು ಸಿಪ್ಪೆನಾ ಬೇರೆ ಬಾಯಿಗೆ ಹೊರಿಸುವ ಪ್ರಯತ್ನ ಮಾಡಬಾರದು. ತನಿಖೆ ನಡೆಯಲಿ, ಅವರನ್ನು ಬಂಧಿಸಬೇಕು. ಸತ್ಯಾಂಶವನ್ನು ಹೊರಗೆ ಬರಲಿ. ರಾಜಕೀಯಕ್ಕೆ ಮಾಡಿದ್ದಾರೋ, ಬೇರೆ ವೈಯಕ್ತಿಕ ವಿಚಾರಕ್ಕೆ ಮಾಡಿದ್ದಾರೋ. ಅದೆಲ್ಲವೋ ಹೊರಗೆ ಬರಬೇಕು. ಜನರಿಗೆ ಗೊತ್ತಾಗಬೇಕು. ಯಾವ ತನಿಖೆ ಬೇಕಾದರೂ ಮಾಡಲಿ. ಒಟ್ಟಾರೆ ಪೊಲೀಸ್ ರು ಫೇಲ್ ಆಗಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಫೇಲ್ ಆಗಿದೆ. ಸರಿಯಾಗಿ ನೋಡ್ದೆ, ಮಾರಲ್ ಪೋಲಿಸ್ ಹೇಳದ್ದೆ.. ಗೃಹ ಸಚಿವರು ಹೇಳಿದ್ದನ್ನು ಲೋಕಲ್ ಎಸ್ಪಿ ಹೇಳಲಿ. ಬಿಜೆಪಿಯವರಿಗೆ ರಾಜಕೀಯನೇ ಮುಖ್ಯ. ರಾಜಕಾರಣದಿಂದ ಯಾರಾದರೂ ಮೇಲೆ‌ ಹಾಕಬೇಕು. ಹಾಕಲಿ ಯಾರು ಬೇಡ ಅಂದರು. ಅವರಲ್ಲಿ ಇರುವ ಹುಳಕನ್ನ ಮುಚ್ಚಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.